kic-banner
 
FAQs
 
1.
2.
3.
4.
5.
6.
7.
8.
9.
10.
11.
12.
13.
14.
15.
16.
17.
18.
19.
20.
21.
22.
23.
24.
25.
26.
27.
28.
29.
30.
31.
1.
ಉತ್ತರ.
ಕರ್ನಾಟಕ ಮಾಹಿತಿ ಆಯೋಗವು ರಾಜ್ಯಪತ್ರದ ಅಧಿಕೃತ ಅಧಿಸೂಚನೆಯ ಮೂಲಕ 12ನೇ ಅಕ್ಟೋಬರ್ 2005 ರಂದು ಜಾರಿಗೆ ಬಂದಿತು. ಇದರಲ್ಲಿ ಕೆಲವೊಂದು ಪ್ರಕರಣಗಳು ತಕ್ಷಣವೇ ಜಾರಿಗೆ ಬಂದಿತ್ತು. ಉದಾ: ಸಾರ್ವಜನಿಕ ಪ್ರಾಧಿಕಾರಗಳ ಹೊಣೆಗಾರಿಕೆ, ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕಾತಿ, ಕೇಂದ್ರ ಮಾಹಿತಿ ಆಯೋಗದ ರಚನೆ ಮತ್ತು ಪದಾವಧಿ ಮತ್ತು ಸೇವಾ ಷರತ್ತುಗಳು, ರಾಜ್ಯ ಮಾಹಿತಿ ಆಯೋಗದ ರಚನೆ ಮತ್ತು ಪದಾವಧಿ ಮತ್ತು ಸೇವಾ ಷರತ್ತುಗಳು, ಅಧಿನಿಯಮವು ಕೆಲವು ಸಂಸ್ಥೆಗಳಿಗೆ ಅನ್ವಯಿಸದಿರುವುದು, ಸಮುಚಿತ ಸರ್ಕಾರದ ನಿಯಮ ರಚನಾಧಿಕಾರ ಮತ್ತು ಸಕ್ಷಮ ಪ್ರಾಧಿಕಾರದಿಂದ ನಿಯಮ ರಚನಾಧಿಕಾರ.
 
2.
ಉತ್ತರ.
ಮಾಹಿತಿ ಹಕ್ಕು ಕಾಯ್ದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯವಾಗುತ್ತದೆ.
 
3.
ಉತ್ತರ.
ಮಾಹಿತಿ ಎಂದರೆ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರದಿಂದ ಪಡೆಯಬಹುದಾದ ದಾಖಲೆಗಳು, ದಸ್ತಾವೇಜುಗಳೂ, ಮೆಮೋಗಳು, ಇ-ಮೇಲ್ಗಳು, ಅಭಿಪ್ರಾಯಗಳು, ಸಲಹೆಗಳು, ಪತ್ರಿಕಾ ಹೇಳಿಕೆಗಳೂ, ಸುತ್ತೋಲೆಗಳು, ಆದೇಶಗಳು, ಲಾಗ್ ಪುಸ್ತಕಗಳು, ಕರಾರುಗಳು, ವರದಿಗಳು, ಕಾಗದಪತ್ತಗಳು, ನಮೂನೆಗಳು, ಮಾದರಿಗಳು, ಯಾವುದೇ ವಿದ್ಯುನ್ಮಾನ ರೂಪದಲ್ಲಿ ಹೊಂದಿರುವ ದತ್ತಾಂಶ ಮತ್ತು ಯಾವುದೇ ಖಾಸಗಿ ನಿಕಾಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡಂತೆ ಯಾವುದೇ ರೂಪದಲ್ಲಿರುವ ಯಾವುದೇ ವಿಷಯ ಸಾಮಗ್ರಿ.
 
4.
It includes the right to -
ಉತ್ತರ.
(i)
ಕೆಲಸದ, ದಸ್ತಾವೇಜುಗಳು, ದಾಖಲೆಗಳ, ಪರಿವೀಕ್ಷಣೆ ಮಾಡುವುದು.
(ii)
ii. ದಸ್ತಾವೇಜುಗಳ ಅಥವಾ ದಾಖಲೆಗಳ ಟಿಪ್ಪಣಿಗಳನ್ನು, ಉದ್ಧೃತ ಭಾಗಗಳನ್ನು ಅಥವಾ ಪ್ರಮಾಣೀಕೃತ ಪ್ರತಿಗಳನ್ನು ತೆಗೆದುಕೊಳ್ಳುವುದು.
(iii)
ವಿಷಯ ಸಾಮಗ್ರಿಯ ಪ್ರಮಾಣೀಕೃತ ಮಾದರಿಗಳನ್ನು ಪಡೆದುಕೊಳ್ಳುವುದು
(vi)
iv. ಡಿಸ್ಕೆಟ್ಗಳು, ಪ್ಲಾಫಿಗಳು, ವಿಡಿಯೋ ಕ್ಯಾಸೆಟ್ಗಳ ರೂಪದಲ್ಲಿ ಅಥವಾ ಯಾವುದೇ ಇತರ ವಿದ್ಯುನ್ಮಾನ ವಿಧಾನದಲ್ಲಿ ಅಥವಾ ಅಂತಹ ಮಾಹಿತಿಯನ್ನು ಗಣಕಯಂತ್ರದಲ್ಲಿ ಅಥವಾ ಯಾವುದೇ ಇತರ ಸಾಧನದಲ್ಲಿ ಸಂಗ್ರಹಿಸಿಟ್ಟಿದ್ದರೆ ಅದರ ಮುದ್ರಿತ ಪ್ರತಿಯ ಮೂಲಕ ಮಾಹಿತಿ ಪಡೆಯುವ ಹಕ್ಕು ಒಳಗೊಂಡಿರುತ್ತದೆ.
 
5.
ಉತ್ತರ.
ಈ ಅಧಿನಿಯಮವನ್ನು ಅಧಿನಿಯಮಿತಿಗೊಳಿಸಿದ ದಿನಾಂಕದಿಂದ ಒಂದುನೂರು ಇಪ್ಪತ್ತು ದಿನಗಳೊಳಗಾಗಿ:-
(i)
ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳನ್ನು;
(ii)
ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು;
(iii)
ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನು;
(iv)
ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳನ್ನು;
(v)
ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳನ್ನು;
(vi) ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರಪಟ್ಟಿಯನ್ನು;
(vii)
ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳನ್ನು;
(viii)
ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿಕೆಯನ್ನು;
(ix)
ಅದರ ಅಧಿಕಾರಿಗಳ ಮತ್ತು ನೌಕರರ ನಿzÉÃðಶಿಕೆಯನ್ನು;
(x)
ಅದರ ವಿನಿಯಮಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಸಂಬಳವನ್ನು;
(xi)
ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯವನ್ನು;
(xii)
ಹಂಚಿಕೆ ಮಾಡಲಾದ ಮೊಬಲಗನ್ನೂಳಗೊಂಡು, ಸಹಾಯಧನ PÁAiÀÄðPÀæಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳನ್ನು;
(xiii)
ಅದು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಪತ್ರಗಳನ್ನು ಪಡೆಯುವವರ ವಿವರಗಳನ್ನು;
(xvi)
ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವತರ್ಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು;
(xv)
ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು;
(xvi)
ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸತಕ್ಕದ್ದು.
6.
ಉತ್ತರ.
ಈ ಅಧಿನಿಯಮದಲ್ಲಿ ಏನೇ ಇದ್ದರೂ, ಯಾರೇ ನಾಗರಿಕನಿಗೆ ಈ ಮುಂದಿನ ಯಾವುದೇ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿರತಕ್ಕದ್ದಲ್ಲ: ಎಂದರೆ:-
(i)
ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಭಾರತದ ಸಾರ್ವಭೌಮತ್ವ ಮತ್ತು ಏಕತೆ, ರಾಷ್ಟ್ರದ ಭದ್ರತೆ, ಕಾರ್ಯ ತಂತ್ರ, ರಾಜ್ಯದ ವೈಜ್ಞಾನಿಕ ಅಥವಾ ಆಥರ್ಿಕ ಹಿತಾಸಕ್ತಿಗಳು, ವಿದೇಶದೊಂದಿಗಿನ ಸಂಬಂಧ ಇವುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೋ ಅಥವಾ ಒಂದು ಅಪರಾಧಕ್ಕೆ ಪ್ರೇರಣೆ ನೀಡುತ್ತದೋ ಅಂಥ ಮಾಹಿತಿ;
(ii)
ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣವು ಯಾವ ಮಾಹಿತಿ ಪ್ರಕಟನೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆಯೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ನ್ಯಾಯಾಲಯ ನಿಂದನೆಯಾಗಬಹುದೋ ಅಂಥ ಮಾಹಿತಿ;
(iii)
ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮೂರನೇ ಅಥವಾ ರಾಜ್ಯ ವಿಧಾನ ಮಂಡಲದ ಹಕ್ಕುಚ್ಯುತಿ ಉಂಟಾಗುವುದೋ ಅಂಥ ಮಾಹಿತಿ;
(vi)
ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮೂರನೇ ಪಕ್ಷದಾರನ ¸ತೊಂದರೆಯುಂಟಾಗುತ್ತದೋ ಅಂಥ ವಾಣಿಜ್ಯ ರಹಸ್ಯ, ವ್ಯಾಪಾರ ಗೌಪ್ಯತೆಗಳು ಅಥವಾ ಬೌದ್ಧಿಕ ಆಸ್ತಿಯನ್ನೊಳಗೊಂಡ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು;
(v)
ತನ್ನ ನಂಬಿಕೆಯ ವಿಶ್ವಾಸದ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ದೊರಕುವ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು;
(vi)
ವಿದೇಶಿ ಸPÁðರದಿಂದ ರಹಸ್ಯವಾಗಿ ಪಡೆದ ಮಾಹಿತಿ;
(vii)
ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಯಾರೇ ವ್ಯಕ್ತಿಯ ಜೀವ ಅಥವಾ ಸುರಕ್ಷತೆಗೆ ಅಪಾಯ ಉಂಟಾಗುತ್ತದೋ ಅಂಥ ಮಾಹಿತಿ ಅಥವಾ ಕಾನೂನು ಜಾರಿಯ ಅಥವಾ ಭದ್ರತೆಯ ಉದೇಶಗಳಿಗಾಗಿ ರಹಸ್ಯವಾಗಿ ನೀಡಿದ ಮಾಹಿತಿಯ ಅಥವಾ ಸಹಾಯದ ಮೂಲವನ್ನು ಗುರುತಿಸಬಹುದಾದಂಥ ಮಾಹಿತಿ;
(viii)
ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂಥ ಮಾಹಿತಿ;
(ix)
ಮಂತ್ರಿ ಪರಿಷತ್ತಿನ, ಕಾರ್ಯದ²ðಗಳ ಮತ್ತು ಇತರ ಅಧಿಕಾರಿಗಳ ಚZÉðಗಳ ದಾಖಲೆಗಳು ಸೇರಿದಮತೆ ಸಚಿವ ಸಂಪುಟದ ಕಾಗದ ಪತ್ರಗಳು;
(x)
ಮಂತ್ರಿ ಪರಿಷತ್ತಿನ ನಿರ್ಣಯಗಳು, ಆ ನಿರ್ಣಯಗಳಿಗೆ ಕಾರಣಗಳು ಮತ್ತು ತೆಗೆದುಕೊಮಡ ನಿರ್ಣಯಗಳಿಗೆ ಅಧರಿಸಿದ ವಿಷಯ ಸಾಮಗ್ರಿ ಇವುಗಳನ್ನು, ನಿರ್ಣಯನ್ನು ತೆಗೆದುಕೊಂಡ ಮತ್ತು ಆ ವಿಷಯ ಪೂರ್ಣಗೊಂಡ ಅಥವಾ ಮುಕ್ತಾಯಗೊಂಡ ತರುವಾಯ ಸಾರ್ವಜನಿಕರಿಗೆ ತಿಳಿಯುವಂತೆ ಮಾಡತಕ್ಕದ್ದು;ಮತ್ತು, ಈ ಪ್ರಕರಣದಲ್ಲಿ ವಿನಾಯಿತಿಗಳ ಅಡಿಯಲ್ಲಿ ಬರುವಂಥ ವಿಷಯಗಳನ್ನು .ಬಹಿರಂಗಪಡಿಸತಕ್ಕದ್ದಲ್ಲ.
(xi)
ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಮೇಲ್ಮನವಿ ಪ್ರಾಧಿಕಾರಕ್ಕೆ ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಸಮ್ಮತ ಎಂದು ಮನದಟ್ಟಾದ ಹೊರತು ಯಾವ ಮಾಹಿತಿಯ ಬಹಿರಂಗಪಡಿಸುವಿಕೆಯು ಯವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಸಂಬಂಧಪಡುವುದಿಲ್ಲವೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಮದ ವ್ಯಕ್ತಿಗತ ಗೌಪ್ಯತೆಯನ್ನು ಅನಗತ್ಯವಾಗಿ ಅತಿಕ್ರಮಿಸಿದಂತಾಗುತ್ತದೆಯೋ ಅಂಥ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದ ಮಾಹಿತಿ; ಮತ್ತು, ಸಂಸತ್ತು ಅಥವಾ ರಾಜ್ಯ ವಿಧಾನ ಮಂಡಲಕ್ಕೆ ನಿರಾಕರಿಸಲಾಗದಂಥ ಮಾಹಿತಿಯನ್ನು ಯಾರೇ ವ್ಯಕ್ತಿಗೆ ನಿರಾಕರಿಸತಕ್ಕದ್ದಲ್ಲ.
 
7.
ಉತ್ತರ.
ಮಾಹಿತಿ ಪಡೆಯುವುದಕ್ಕಾಗಿ ಸಲ್ಲಿಸಿದ ಕೋರಿಕೆಯನ್ನು, ಕೋರಿರುವ ಮಾಹಿತಿಯು ಬಹಿರಂಗಪಡಿಸುವುದರಿಂದ ವಿನಾಯಿತಿಗೊಳಿಸಿರುವಂಥ ಮಾಹಿತಿಗೆ ಸಂಬಂಧಿಸಿದ್ದಾಗಿದೆ ಎಂಬ ಕಾರಣದ ಮೇಲೆ ತಳ್ಳಿ ಹಾಕಿದಾಗ ಈ ಅಧಿನಿಯಮದಲ್ಲಿ ಏನೆ ಒಳಗೊಂಡಿದ್ದರೂ, ಈ ಅಧಿನಿಯಮದ ಅಡಿಯಲ್ಲಿ ಬಹಿರಂಗಪಡಿಸುವುದರಿಂದ ವಿನಾಯಿತಿಗೊಳಿಸಿರುವಂಥ ಯಾವುದೇ ಮಾಹಿತಿಯನ್ನು ಒಳಗೊಂಡಿರದಂಥ ಹಾಗೂ ವಿನಾಯಿತಿಗೊಳಿಸಿರುವ ಮಾಹಿತಿಯನ್ನೂಳಗೊಂಡ ಯಾವುದೇ ಭಾಗದಿಂದ ಅದನ್ನು ಯುಕ್ತವಾಗಿ ಪ್ರತ್ಯೇಕಿಸಬಹುದಾದಂಥ ದಾಖಲೆಯ ಆ ಭಾಗವನ್ನು ಪಡೆಯಲು ಅವಕಾಶ ನೀಡಬಹುದು.
 
8.
ಉತ್ತರ.
ಸಾರ್ವಜನಿಕ ಪ್ರಾಧಿಕಾರ ಎಂದರೆ:-

ಸಂವಿಧಾನದ ಮೂಲಕ ಅಥವಾ ಅದರ ಅಡಿಯಲ್ಲಿ;

ಸಂಸತ್ತಿನಿಂದ ಮಾಡಲಾದ ಯಾವುದೇ ಇತರ ಕಾನೂನಿನ ಮೂಲಕ;

ರಾಜ್ಯ ವಿಧಾನ ಮಂಡಲದಿಂದ ಮಾಡಲಾದ ಯಾವುದೇ ಇತರ ಕಾನೂನಿನ ಮೂಲಕ;

ಸಮುಚಿತ ಸಕರ್ಾರದಿಂದ ಹೊರಡಿಸಲಾದ ಅಧಿಸೂಚನೆ ಅಥವಾ ಮಾಡಲಾದ ಆದೇಶದ ಮೂಲಕ ಸ್ಥಾಪಿತವಾದ ಅಥವಾ ರಚಿತವಾದ ಯಾವುದೇ ಪ್ರಾಧಿಕಾರ ಅಥವಾ ನಿಕಾಯ ಅಥವಾ ಸ್ವಯಂ ಆಡಳಿತ ಸಂಸ್ಥೆ ಮತ್ತು ಇದು:-


a.
ಸಮುಚಿತ ಸಕರ್ಾರದ ಒಡೆತನಕ್ಕೆ, ನಿಯಂತ್ರಣಕ್ಕೆ ಒಳಪಟ್ಟ ಅಥವಾ ಅಂಥ ಸPÁðರ ಒದಗಿಸಿದ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣಕಾಸು ನೆರವು ಪಡೆದ ಯಾವುದೇ ನಿಕಾಯವನ್ನು;
b.
b. ಸಮುಚಿತ ಸPÁðರ ಒದಗಿಸಿದ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣಕಾಸು ನೆರವು ಪಡೆದ ಸPÁðರೇತರ ಸಂಸ್ಥೆಯನ್ನು ಒಳಗೊಳ್ಳುತ್ತದೆ.
 
9.
ಉತ್ತರ.
ಸಮುಚಿತ ಸPÁðರ ಒದಗಿಸಿದ ನಿಧಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಗಣನೀಯ ಪ್ರಮಾಣದ ಹಣಕಾಸು ನೆರವು ಪಡೆದ ಸPÁðರೇತರ ಸಂಸ್ಥೆಯು ಒಳಗೊಳ್ಳುತ್ತದೆ.
 
10.
ಉತ್ತರ.
ಮೂರನೇ ಪಕ್ಷದಾರ ಎಂದರೆ, ಮಾಹಿತಿಗಾಗಿ ಕೋರಿಕೆ ಸಲ್ಲಿಸುವ ನಾಗರಿಕನನ್ನು ಹೊರತುಪಡಿಸಿದ ವ್ಯಕ್ತಿ ಮತ್ತು ಸಾರ್ವಜನಿಕ ಪ್ರಾಧಿಕಾರವನ್ನು ಒಳಗೊಳ್ಳುತ್ತದೆ.
 
11.
ಉತ್ತರ.
ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದರೆ 5ನೇ ಪ್ರಕರಣದ (1)ನೇ ಉಪ ಪ್ರಕರಣದ ಅಡಿಯಲ್ಲಿ ಹೆಸರಿಸಲಾದ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು (2)ನೇ ಉಪ ಪ್ರಕರಣದ ಅಡಿಯಲ್ಲಿ ಹಾಗೆ ಹೆಸರಿಸಲಾದ ರಾಜ್ಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಒಳಗೊಳ್ಳುತ್ತದೆ.
 
12.
ಉತ್ತರ.
ಆ ಅಧಿನಿಯಮದ ಅಡಿಯಲ್ಲಿ ಯಾವುದೇ ಮಾಹಿತಿಯನ್ನು ಪಡೆಯಲಿಚ್ಛಿಸುವ ವ್ಯಕ್ತಿಯು ಲಿಖಿತದಲ್ಲಿ ಅಥವಾ ಮೌಖಿಕವಾಗಿ ಕೋರಿಕೆ ಸಲ್ಲಿಸಿದಾಗ ವ್ಯಕ್ತಿಗೆ ಅದನ್ನು ಬರವಣಿಗೆ ಮೂಲಕ ಕಾರ್ಯರೂಪಕ್ಕೆ ತರಲು ಸೂಕ್ತ ನೆರವನ್ನು ನೀಡತಕ್ಕದ್ದು. ಸಾರ್ವಜನಿಕ ಪ್ರಾಧಿಕಾರಕ್ಕೆ ಅfð ಸಲ್ಲಿಸಿದ್ದರೆ, ಯಾವ ಪ್ರಾಧಿಕಾರಕ್ಕೆ ಅfð ಸಲ್ಲಿಸಲಾಗಿದೆಯೋ ಆ ಸಾರ್ವಜನಿಕ ಪ್ರಾಧಿಕಾರವು ಅfðಯನ್ನು ಅಥವಾ ಸಮುಚಿತವೆನಿಸಬಹುದಾದ ಅದರ ಭಾಗವನ್ನು ಆ ಮತ್ತೊಂದು ಪ್ರಾಧಿಕಾರಕ್ಕೆ ಅfð ಸ್ವೀಕರಿಸಿದ ದಿನಾಂಕದಿಂದ ಐದು ದಿನಗಳೊಳಗಾಗಿ ವUÁðಯಿಸತಕ್ಕದ್ದು. ಕೋರಿಕೆಯನ್ನು ಸ್ವೀಕರಿಸಿದ ನಂತರ ಸ್ವರಿತವಾಗಿ ಮತ್ತು ಯಾವುದೇ ಸಂದರ್ಭದಲ್ಲಿ ಕೋರಿಕೆ ಸ್ವೀಕರಿಸಿದ ಮೂವತ್ತು ದಿವಸಗಳೊಳಗಾಗಿ, ನಿಗದಿಪಡಿಸಬಹುದಾದಂತ ಶುಲ್ಕವನ್ನು ಸಂದಾಯ ಮಾಡಿದ ಮೇಲೆ ಮಾಹಿತಿ ಒದಗಿಸತಕ್ಕದ್ದು ಅಥವಾ 8 ಮತ್ತು 9 ನೇ ಪ್ರಕರಣಗಳಲ್ಲಿ ನಿ¢üðಷ್ಟಪಡಿಸಿರುವ ಯಾವುದೇ ಕಾರಣಗಳಿಗಾಗಿ ಕೋರಿಕೆಯನ್ನು ತಿರಸ್ಕರಿಸತಕ್ಕದ್ದು. ಕೋರಿರುವ ಮಾಹಿತಿಯು ಒಬ್ಬ ವ್ಯಕ್ತಿಯ ಜೀವ ಅಥವಾ ಸ್ವಾತಂತ್ಯ್ರಕ್ಕೆ ಸಂಬಂಧಿಸಿದ್ದಲ್ಲಿ ಆ ಮಾಹಿತಿಯ ಕೋರಿಕೆಯನ್ನು ಸ್ವೀಕರಿಸಿದ ನಲವತ್ತೆಂಟು ಗಂಟೆಗಳೊಳಗಾಗಿ ಒದಗಿಸತಕ್ಕದ್ದು. ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಥವಾ ಸಂzÀ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು (1)ನೇ ಉಪಪ್ರಕರಣದ ಅಡಿಯಲ್ಲಿ ನಿ¢üðಷ್ಟಪಡಿಸಿರುವ ಅವಧಿಯೊಳಗಾಗಿ ಮಾಹಿತಿಗಾಗಿ ಮಾಡಿಕೊಂಡ ಕೋರಿಕೆಯ ಮೇಲೆ ತೀªÀiÁðನ ತೆಗೆದುಕೊಳ್ಳಲು ವಿಫಲನಾದಲ್ಲಿ, ಕೋರಿಕೆಯನ್ನು ತಿರಸ್ಕರಿಸಿದ್ದಾನೆಂದು ಭಾವಿಸತಕ್ಕದ್ದು. ಕೋರಿಕೆಯನ್ನು (1)ನೇ ಉಪಪ್ರಕರಣದ ಅಡಿಯಲ್ಲಿ ನಿರಾಕರಿಸಿದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಥವಾ ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಕೋರಿಕೆ ಸಲ್ಲಿಸುವ ವ್ಯಕ್ತಿಗೆ:- (1) ಅಂಥ ನಿರಾಕರಣೆಗೆ ಕಾರಣಗಳನ್ನು, (2) ಅಂಥ ನಿರಾಕರಣೆಯ ವಿರುದ್ಧ ಅಪೀಲು ಸಲ್ಲಿಸಲು ಇರುವ ಅವಧಿಯನ್ನು; ಮತ್ತು ಅಪೀಲು ಪ್ರಾಧಿಕಾರದ ವಿವರಗಳನ್ನು ತಿಳಿಸತಕ್ಕದ್ದು. ಮಾಹಿತಿಯನ್ನು, ಸಾರ್ವಜನಿಕ ಪ್ರಾಧಿಕಾರದ ಸಂಪನ್ಮೂಲಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವಂತಿದ್ದ ಹೊರತು, ಅಥವಾ ಪ್ರಶ್ನಿತವಾಗಿರುವ ದಾಖಲೆಯ ಸುರಕ್ಷತೆಗೆ ಅಥವಾ ಸಂರಕ್ಷಣೆಗೆ ಹಾನಿಯುಂಟಾಗುವಂತಿದ್ದ ಹೊರತು, ಸಾಮಾನ್ಯವಾಗಿ ಅದನ್ನು ಕೋರಿದ ನಮೂನೆಯಲ್ಲಿ ಒದಗಿಸತಕ್ಕದ್ದು.
a.
(1) ಬಹಿರಂಗಪಡಿಸುವುದರಿಂದ ವಿನಾಯಿತಿಗೊಳಿಸಲಾಗಿರುವಂಥ ಮಾಹಿತಿಯನ್ನು ಒಳಗೊಂಡಿರುವ ದಾಖಲೆಯನ್ನು ಪ್ರತ್ಯೇಕಿಸಿದ ನಂತರ, ಕೋರಲಾಗಿರುವ ದಾಖಲೆಯ ಭಾಗವನ್ನು ಮಾತ್ರ ಒದಗಿಸಲಾಗುತ್ತದೆ ಎಂದು ತಿಳಿಸಿ;
b.
(2) ನಿರ್ಣಯಗಳು ಯಾವ ವಿಷಯ ಸಾಮಗ್ರಿಯನ್ನು ಆಧರಿಸಿವೆಯೊ ಆ ವಿಷಯ ಸಾಮಗ್ರಿಯ ಉಲ್ಲೇಖವನ್ನು ಒಳಗೊಂಡಂತೆ ಸಂಗತಿಗೆ ಸಂಬಂಧಿಸಿದ ಯಾವುದೇ ಮುಖ್ಯ ಪ್ರಶ್ನೆಯ ಮೇಲಿನ ಯಾವುದೇ ನಿರ್ಣಯಕ್ಕೆ ಕಾರಣಗಳು;
c.
(3) ನಿರ್ಣಯ ನೀಡುವ ವ್ಯಕ್ತಿಯ ಹೆಸರು ಮತ್ತು ಪದನಾಮ;
d.
d. (4) ಆತನು ಅಥವಾ ಆಕೆಯು ಲೆಕ್ಕ ಹಾಕಿದ ಶುಲ್ಕದ ವಿವರಗಳು ಮತ್ತು ಅfðದಾರನು ಠೇವಣಿ ಮಾಡಬೇಕಾದ ಶುಲ್ಕದ ಮೊಬಲಗು; ಮತ್ತು
e.
e. (5) ಮಾಹಿತಿಯ ಭಾಗವನ್ನು ಬಹಿರಂಗಪಡಿಸದಿರುವುದಕ್ಕೆ ಸಂಬಂಧಿಸಿದ ನಿzsÁðರವನ್ನು ಪುನರ್ ಪರಿಶೀಲಿಸುವುದಕ್ಕೆ ಸಂಬಂಧಪಟ್ಟಂತೆ ಆತನಿಗೆ ಅಥವಾ ಆಕೆಗೆ ಇರುವ ಹಕ್ಕುಗಳು, ವಿಧಿಸಲಾದ ಶುಲ್ಕದ ಮೊಬಲಗಿಗೆ ಒಂದು ನೋಟೀಸು ನೀಡತಕ್ಕದ್ದು.
ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಥವಾ ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಈ ಅಧಿನಿಯಮದ ಮೇರೆಗೆ ಸಲ್ಲಿಸಿರುವ ಕೋರಿಕೆಯ ಮೇಲೆ ಮೂರನೇ ಪಕ್ಷದಾರನಿಗೆ ಸಂಬಂಧಿಸಿದ ಅಥವಾ ಆತ ಪೂರೈಸಿದಂಥ ಹಾಗೂ ಆ ಮೂರನೇ ಪಕ್ಷಕಾರನು ರಹಸ್ಯ ಎಂದು ಪರಿಗಣಿಸಿರುವಂಥ ಯಾವುದೇ ಮಾಹಿತಿಯನ್ನು ಅಥವಾ ದಾಖಲೆಯನ್ನು ಅಥವಾ ಅದರ ಭಾಗವನ್ನು ಬಹಿರಂಗಪಡಿಸಲು ಉದ್ದೇಶಿಸಿದಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಥವಾ ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು, ಕೋರಿಕೆಯನ್ನು ಸ್ವೀಕರಿಸಿದ ಐದು ದಿವಸಗಳೊಳಗೆ, ಆ ಕೋರಿಕೆಯನ್ನು ಸಲ್ಲಿಸಿರುವಂಥ ಮೂರನೇ ಪಕ್ಷದಾರನಿಗೆ ಮಾಹಿತಿಯನ್ನು ಅಥವಾ ದಾಖಲೆಯನ್ನು ಅಥವಾ ಅದರ ಭಾಗವನ್ನು ಬಹಿರಂಗಪಡಿಸಲು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಥವಾ ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಉದ್ದೇಶಿಸಿದ್ದಾನೆ ಎಂಬ ವಾಸ್ತವ ಸಂಗತಿಯನ್ನು ತಿಳಿಸಿ ಲಿಖಿತ ನೋಟೀಸು ನೀಡತಕ್ಕದ್ದು ಹಾಗೂ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಥವಾ ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು, ಯಾವುದೇ ಮಾಹಿತಿ ಅಥವಾ ದಾಖಲೆ ಅಥವಾ ಅದರ ಭಾಗದ ಸಂಬಂಧದಲ್ಲಿ ಮೂರನೆಯ ಪಕ್ಷದಾರನಿಗೆ ಉಪಪ್ರಕರಣ (1)ರ ಮೇರೆಗೆ ನೋಟೀಸನ್ನು ಜಾರಿ ಮಾಡಿರುವಲ್ಲಿ, ಅಂಥ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂದ ಹತ್ತು ದಿವಸಗಳೊಳಗೆ ಉದ್ದೇಶಿತ ಬಹಿರಂಗಪಡಿಸುವಿಕೆಯ ವಿರುದ್ದ ಮನವಿಯನ್ನು ಸಲ್ಲಿಸಲು ಮೂರನೆಯ ಪಕ್ಷದಾರನಿಗೆ ಅವಕಾಶ ನೀಡತಕ್ಕದ್ದು.
 
13.
ಉತ್ತರ.
1.
ಈ ಅಧಿನಿಯಮದ ಅಡಿಯಲ್ಲಿ ಯಾವುದೇ ಮಾಹಿತಿಯನ್ನು ಪಡೆಯಲಿಚ್ಛಿಸುವ ವ್ಯಕ್ತಿಯು ಲಿಖಿತದಲ್ಲಿ ಅಥವಾ ವಿದ್ಯುನ್ಮಾನ ಸಾಧನಗಳ ಮೂಲಕ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಅಥವಾ ಸಲ್ಲಿಸಲಾಗುತ್ತಿರುವಂಥ ಅಧಿಕೃತ ಪ್ರಾದೇಶಿಕ ಭಾಷೆಯಲ್ಲಿ ಅfðಯನ್ನು ಕೋರಿರುವ ಮಾಹಿತಿಯ ವಿವರಗಳನ್ನು ನಿ¢üðಷ್ಟಪಡಿಸಿ, ಸಾರ್ವಜನಿಕ ಮಾಹಿತಿ ಅಧಿಕಾರಿಗೆ ನೀಡುವುದು.
2.
ಮಾಹಿತಿಗಾಗಿ ಕೋರಿಕೆ ಸಲ್ಲಿಸುವ ಅfðದಾರನನ್ನು, ಅವನನ್ನು ಸಂಪQðಸಲು ಅವಶ್ಯವಿರುವ ವಿವರಗಳನ್ನು ಹೊರತುಪಡಿಸಿ ಮಾಹಿತಿ ಕೋರಿಕೆಗೆ ಯಾವುದೇ ಕಾರಣವನ್ನು ಅಥವಾ ಯಾವುದೇ ಇತರ ವೈಯಕ್ತಿಕ ವಿವರಗಳನ್ನು ನೀಡುವಂತೆ ಅಗತ್ಯಪಡಿಸತಕ್ಕದ್ದಲ್ಲ.
3.
ನಿಗಧಿಪಡಿಸಿರುವ ಶುಕ್ಕದೊಂದಿಗೆ (ವ್ಯಕ್ತಿಯು ಬಡತನರೇಖೆಯ ವರ್ಗಕ್ಕೆ ಸೇರದಿರುವವರು).
 
14.
ಉತ್ತರ.
1.
ಕೋರಿಕೆಯನ್ನು ಸ್ವೀಕರಿಸಿದ ನಂತರ ತ್ವರಿತವಾಗಿ ಮತ್ತು ಯಾವುದೇ ಸಂದರ್ಭದಲ್ಲಿ ಕೋರಿಕೆ ಸ್ವೀಕರಿಸಿದ ಮೂವತ್ತು ದಿವಸಗಳೊಳಗಾಗಿ ಒದಗಿಸತಕ್ಕದ್ದು.
2.
ಕೋರಿರುವ ಮಾಹಿತಿಯು ಒಬ್ಬ ವ್ಯಕ್ತಿಯ ಜೀವ ಅಥವಾ ಸ್ವಾತಂತ್ಯ್ರಕ್ಕೆ ಸಂಬಂಧಿಸಿದ್ದಲ್ಲಿ ಆ ಮಾಹಿತಿಯ ಕೋರಿಕೆಯನ್ನು ಸ್ವೀಕರಿಸಿದ ನಲವತ್ತೆಂಟು ಗಂಟೆಗಳೊಳಗಾಗಿ ಒದಗಿಸತಕ್ಕದ್ದು.
3.
ಕೋರಿಕೆಗೆ ಸಂಬಂಧಿಸಿದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಮೊದಲು ಮೂರನೇ ಪಕ್ಷಕಾರನು ಸಲ್ಲಿಸಿದ ಮನವಿಯನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು.
4.
ಸಾರ್ವಜನಿಕ ಮಾಹಿತಿ ಅಧಿಕಾರಿಯು ¤¢üðಷ್ಟಪಡಿಸಿರುವ ಅವಧಿಯೊಳಗಾಗಿ ಮಾಹಿತಿಗಾಗಿ ಮಾಡಿಕೊಂಡ ಕೋರಿಕೆಯ ಮೇಲೆ ತೆಗೆದುಕೊಳ್ಳಲು ವಿಫಲನಾದಲ್ಲಿ, ಕೋರಿಕೆಯನ್ನು ತಿರಸ್ಕರಿಸಿದ್ದಾನೆಂದು ಭಾವಿಸತಕ್ಕದ್ದು.
15.
ಉತ್ತರ.
1.
ನಿಗಧಿ ಪಡಿಸಿರುವ ಪ್ರಾರಂಭಿಕ ಶುಲ್ಕವನ್ನು ಪಾವತಿಸಬೇಕು.
2.
ಪ್ರತಿ ಪ್ರಕರಣದಲ್ಲೂ ಶ್ರಮದ ವೆಚ್ಚ ಮತ್ತು ಬಳಸಲಾಗುವ ಸಾಮಗ್ರಿಯ ಅಗತ್ಯತೆಯನ್ನು ಅವಲಂಬಿಸಿ ಶುಲ್ಕವನ್ನು ನಿಗಸಿಪಡಿಸತಕ್ಕದ್ದು.
3.
ಬಡತನ ರೇಖೆ ಹೊಂದಿರುವವರು ಶುಲ್ಕವನ್ನು ಪಾವತಿಸುವಂತಿಲ್ಲ.
4.
ನಿಗಧಿ ಪಡಿಸಿದ ಶುಲ್ಕವನ್ನು ಸಂದಾಯ ಮಾಡಿದ ನಂತರ ಮಾಹಿತಿಯನ್ನು ಒದಗಿಸತಕ್ಕದ್ದು.
 
16.
ಉತ್ತರ.
1.
ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ.
2.
8ನೇ ಪ್ರಕರಣದ ಉಪಬಂಧಗಳಿಗೆ ಬಾಧಕವಾಗದಂತೆ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಥವಾ ಸಂದಭರ್ಾನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು, ಅಂಥ ಮಾಹಿತಿಯನ್ನು ಒದಗಿಸುವುದರಿಂದ ರಾಜ್ಯವನ್ನು ಹೊರತುಪಡಿಸಿ ಒಬ್ಬ ವ್ಯಕ್ತಿಯು ಹೊಂದಿರುವ ಕೃತಿಸ್ವಾಮ್ಯದ ಉಲ್ಲಂಘನೆಯಾಗಬಹುದಾದಲ್ಲಿ ಮಾಹಿತಿಗಾಗಿ ಮಾಡಿದ ಕೋರಿಕೆಯನ್ನು ತಿರಸ್ಕರಿಸಬಹುದು.
 
17.
ಉತ್ತರ.
1.
ಮೊದಲನೇ ಮೇಲ್ಮನವಿ: 7ನೇ ಪ್ರಕರಣದ (1) ನೇ ಉಪ-ಪ್ರಕರಣದಲ್ಲಿ ಅಥವಾ (3) ನೇ ಉಪಪ್ರಕರಣದ (ಎ) ಖಂಡದಲ್ಲಿ ನಿ¢üðಷ್ಟಪಡಿಸಲಾದ ಸಮಯದೊಳಗೆ ನಿರ್ಣಯವನ್ನು ಸ್ವೀಕರಿಸದಿರುವಂಥ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ನಿರ್ಣಯದಿಂದ ಬಾಧಿತನಾದಂಥ ಯಾರೇ ವ್ಯಕ್ತಿಯು, ಅಂಥ ಅವಧಿಯು ಮುಕ್ತಾಯಗೊಂಡಂದಿನಿಂದ ಅಥವಾ ನಿರ್ಣಯದಿಂದ ಸ್ವೀಕರಿಸಿದ ದಿನದಿಂದ ಮೂವತ್ತು ದಿನಗಳೊಳಗೆ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದಲ್ಲಿ, ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಿಂತ ಹಿರಿಯ ದeÉðಯ ಅಧಿಕಾರಿಗೆ ಮೂವತ್ತು ದಿನಗಳ ಅವಧಿ ಮುಗಿದ ತರುವಾಯ ಅಪೀಲನ್ನು ಸಲ್ಲಿಸಬೇಕು.
2.
ಎರಡನೇ ಮೇಲ್ಮನವಿ: (1)ನೇ ಉಪಪ್ರಕರಣದ ಮೇರೆಗಿನ ನಿರ್ಣಯದ ವಿರುದ್ದ ಸಲ್ಲಿಸುವ ಎರಡನೇ ಅಪೀಲನ್ನು, ಕೇಂದ್ರ ಮಾಹಿತಿ ಆಯೋಗ ಅಥವಾ ರಾಜ್ಯ ಮಾಹಿತಿ ಆಯೋಗವು ನಿರ್ಣಯವನ್ನು ಮಾಡಬೇಕಿದ್ದ ಅಥವಾ ವಾಸ್ತವವಾಗಿ ಸ್ವೀಕರಿಸಿದ ದಿನಾಂಕದಿಂದ ತೊಂಬತ್ತು ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು ಹಾಗೂ ಕೇಂದ್ರ ಮಾಹಿತಿ ಆಯೋಗ ಅಥವಾ ಸಂದಭರ್ಾನುಸಾರ, ರಾಜ್ಯ ಮಾಹಿತಿ ಆಯೋಗಕ್ಕೆ ಅಪೀಲುದಾರನು ಸಕಾಲದಲ್ಲಿ ಅಪೀಲನ್ನು ಸಲ್ಲಿಸಲು ಯುಕ್ತ ಕಾರಣದಿಂದ ಪ್ರತಿಬಂಧಿತನಾಗಿದ್ದಾನೆಂದು ಮನದಟ್ಟಾದರೆ, ತೊಂಭತ್ತು ದಿನಗಳ ಅವಧಿಯು ಮುಗಿದ ತರುವಾಯ ಎರಡನೇ ಅಪೀಲನ್ನು ಸಲ್ಲಿಸಬೇಕು.
3.
ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದ¨sÁðನುಸಾರ, ಒಬ್ಬ ರಾಜ್ಯ ಮಾಹಿತಿ ಅಧಿಕಾರಿಯು ಮೂರನೇ ಪಕ್ಷದಾರನ ಮಾಹಿತಿಯನ್ನು ಬಹಿರಂಗಪಡಿಸುವಂತೆ 11ನೇ ಪ್ರಕರಣದ ಮೇರೆಗೆ ಮಾಡಿದ ಆದೇಶದ ವಿರುದ್ದ ಅಪೀಲು ಸಲ್ಲಿಸಿದಲ್ಲಿ ಸಂಬಂಧಪಟ್ಟ ಮೂರನೇ ಪಕ್ಷದಾರನು ಆದೇಶದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಅಪೀಲು ಸಲ್ಲಿಸತಕ್ಕದು.
4.
ಯಾವುದೇ ಅಪೀಲು ವ್ಯವಹರಣೆಗಳಲ್ಲಿ, ಕೋರಿಕೆಯ ನಿರಾಕರಣೆ ಸಮರ್ಥನೀಯವಾಗಿತ್ತು ಎಂಬುದನ್ನು ರುಜುವಾತುಪಡಿಸುವ ಹೊಣೆ, ಕೋರಿಕೆಯನ್ನು ನಿರಾಕರಿಸಿದ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮೇಲೆ ಇರತಕ್ಕದ್ದು.
5.
(1)ನೇ ಉಪಪ್ರಕರಣದ ಅಡಿಯಲ್ಲಿ ಅಥವಾ (2)ನೇ ಉಪಪ್ರಕರಣದ ಅಡಿಯಲ್ಲಿ ಸಲ್ಲಿಸಲಾದ ಅಪೀಲನ್ನು, ಅದನ್ನು ಸ್ವೀಕರಿಸದ ಮೂವತ್ತು ದಿನಗಳೊಳಗೆ ಅಥವಾ ಸಂದ¨sÁðನುಸಾರ, ಅದನ್ನು ಸಲ್ಲಿಸಿದ ದಿನಾಂಕದಿಂದ ಒಟ್ಟು ನಲವತ್ತೈದು ದಿನಗಳನ್ನು ಮೀರದ ಹಾಗೆ ವಿಸ್ತರಿಸಿದ ಅವಧಿಯೊಳಗೆ ವಿಲೆ ಮಾಡಿ ಅದರ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸತಕ್ಕದ್ದು..
 
18.
ಉತ್ತರ.
1.
ಕೇಂದ್ರ ಸರ್ಕಾರದ, ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಕೇಂದ್ರ ಮಾಹಿತಿ ಆಯೋಗವು ರಚಿತವಾಗಿದೆ.
2.
 ಆಯೋಗದಲ್ಲಿ ಕೇಂದ್ರವಮುಖ್ಯ ಮಾಹಿತಿ ಆಯುಕ್ತರು (ಕೇಮುಮಾಆ) ಹಾಗೂ 10 ಜನರನ್ನು ಮೀರದಂತೆ ಕೇಂದ್ರ ಮಾಹಿತಿ ಆಯುಕ್ತರು (ಕೇಮಾಆ) ಇರಬಹುದಾಗಿದ್ದು, ಇವರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.
3.
ಕೇಂದ್ರ ಮಾಹಿತಿ ಆಯೋಗದ ಕೇಂದ್ರ ಕಛೇರಿ ದೆಹಲಿಯಲ್ಲಿರತಕ್ಕದ್ದು. ಕೇಂದ್ರ ಮಾಹಿತಿ ಆಯೋಗವು, ಕೇಂದ್ರ ಸPÁðರದ ಪೂರ್ವ ಅನುಮೋದನೆಯೊಂದಿಗೆ ಭಾರತದ ಇತರ ಸ್ಥಳಗಳಲ್ಲಿ ಕಛೇರಿಗಳನ್ನು ಸ್ಥಾಪಿಸಬಹುದು.
4.
ಕೇಂದ್ರ ಮಾಹಿತಿ ಆಯೋಗದ ವ್ಯವಹಾರಗಳ ಸಾಮಾನ್ಯ ಉಸ್ತುವಾರಿ, ನಿzÉÃðಶನ ಮತ್ತು ನಿರ್ವಹಣೆ ಮುಖ್ಯ ಮಾಹಿತಿ ಆಯುಕ್ತನಲ್ಲಿ ನಿಹಿತವಾಗಿರತಕ್ಕದ್ದು. ಆತನಿಗೆ ಮಾಹಿತಿ ಆಯುಕ್ತರುಗಳು ನೆರವು ನೀಡತಕ್ಕದ್ದು. ಆತ ಈ ಅಧಿನಿಯಮದಡಿಯಲ್ಲಿ ಯಾವುದೇ ಇತರ ಪ್ರಾಧಿಕಾರಿಯು ನೀಡುವ ನಿzÉÃðಶನಗಳಿಗೆ ಒಳಪಡದೆ ಕೇಂದ್ರ ಮಾಹಿತಿ ಆಯೋಗವು ಚಲಾಯಿಸಬಹುದಾದಂಥ ಎಲ್ಲ ಅಧಿಕಾರಗಳನ್ನು ಆತನು ಸ್ವತಂತ್ರವಾಗಿ ಚಲಾಯಿಸಬಹುದು ಮತ್ತು ನಿರ್ವಹಿಸಬಹುದಾದಂಥ ಎಲ್ಲ ಕಾರ್ಯಗಳನ್ನು ಮತ್ತು ವಿಷಯಗಳನ್ನು ನಿರ್ವಹಿಸಬಹುದು.
 
19.
ಉತ್ತರ.
1.
ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರುಗಳು ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜಸೇವೆ, ವ್ಯವಸ್ಥಾಪನೆ, ಪತ್ರಿಕೋದ್ಯಮ, ಸಮೂಹ ಮಾಧ್ಯಮ, ನಿರ್ವಹಣೆ ಅಥವಾ ಆಡಳಿತ ಈ ಕ್ಷೇತ್ರಗಳಲ್ಲಿ ಆಳವಾದ ಜ್ಞಾನ ಮತ್ತು ಅನುಭವವನ್ನು ಹೊಂದಿರವುದರೊಂದಿಗೆ, ಸಾರ್ವಜನಿಕ ಜೀವನದಲ್ಲಿ ಉನ್ನತಸ್ಥಾನ ಗಳಿಸಿರುವಂಥ ವ್ಯಕ್ತಿಗಳಾಗಿರತಕ್ಕದ್ದು.
2.
ಮುಖ್ಯ ಮಾಹಿತಿ ಆಯುಕ್ತರು ಅಥವಾ ಸಂದ¨sÁðನುಸಾರ, ಒಬ್ಬ ಮಾಹಿತಿ ಆಯುಕ್ತನು ಒಬ್ಬ ಸಂಸತ್ ಸದಸ್ಯ ಅಥವಾ ಯಾವುದೇ ರಾಜ್ಯದ ಅಥವಾ ಕೇಂದ್ರಾಡಳಿತ ಪ್ರದೇಶದ ವಿಧಾನಮಂಡಲದ ಸದಸ್ಯನಾಗಿರತಕ್ಕದ್ದಲ್ಲ, ಅಥವಾ ಯಾವುದೇ ಇತರ ಲಾಭದಾಯಕ ಪದನಾಮವನ್ನು ಹೊಂದಿರತಕ್ಕದ್ದಲ್ಲ ಅಥವಾ ಯವುದೇ ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ವ್ಯವಹಾರವನ್ನು ನಡೆಸತಕ್ಕದ್ದಲ್ಲ ಅಥವಾ ಯಾವುದೇ ವೃತ್ತಿಯನ್ನು ಅವಲಂಬಿಸಿರತಕ್ಕದ್ದಲ್ಲ.
3.
ಮುಖ್ಯ ಮಾಹಿತ ಆಯುಕ್ತ ಹಾಗೂ ಮಾಹಿತಿ ಆಯುಕ್ತರುಗಳನ್ನು ಪ್ರಾಧಾನ ಮಂತ್ರಿ (ಅಧ್ಯಕ್ಷರು), ಲೋಕಸಭೆಯಲ್ಲಿನ ವಿರೋಧಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯು ನಾಮನಿzÉÃðಶಿಸುವಂಥ ಕೇಂದ್ರ ಸಂಪುಟ ದಜರ್ೆಯ ಸಚಿವರು ಒಳಗೊಂಡಿರುತ್ತಾರೆ.
 
20.
ಉತ್ತರ.
1.
ಕೇಂದ್ರ ಮಾಹಿತಿ ಆಯುಕ್ತರು ತನ್ನ ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ ಆತನಿಗೆ ಆರವತ್ತೈದು ವರ್ಷ ವಯಸ್ಸಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಹುದ್ದೆಯನ್ನು ಹೊಂದಿರತಕ್ಕದ್ದು.
2.
ಕೇಂದ್ರ ಮಾಹಿತಿ ಅಧಿಕಾರಿಯು, ಮಾಹಿತಿ ಆಯುಕ್ತರನ್ನಾಗಿ ಪುನರ್ ನೇಮಕಗೊಳ್ಳುವುದಕ್ಕೆ ಅರ್ಹನಾಗಿರತಕ್ಕದ್ದಲ್ಲ.
3.
ಮುಖ್ಯ ಮಾಹಿತಿ ಆಯುಕ್ತನಿಗೆ ಸಂದಾಯ ಮಾಡತಕ್ಕ ಸಂಬಳ ಮತ್ತು ಭತ್ಯೆಗಳು ಹಾಗೂ ಆತನ ಇತರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳು, ಮುಖ್ಯ ಚುನಾವಣಾ ಆಯುಕ್ತನ ವೇತನ ಮತ್ತು ಭತ್ಯೆಗಳು ಮತ್ತು ಇತರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳಂತೆಯೇ ಇರತಕ್ಕದ್ದು.
 
21.
ಉತ್ತರ.
1.
ಮಾಹಿತಿ ಆಯುಕ್ತರು ತನ್ನ ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ ಆತನಿಗೆ ಆರವತ್ತೈದು ವರ್ಷ ವಯಸ್ಸಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಹುದ್ದೆಯನ್ನು ಹೊಂದಿರತಕ್ಕದ್ದು ಮತ್ತು ಅಂಥ ಮಾಹಿತಿ ಆಯುಕ್ತರನ್ನಾಗಿ ಪುನರ್ ನೇಮಕಗೊಳ್ಳುವುದಕ್ಕೆ ಅರ್ಹನಾಗಿರತಕ್ಕದ್ದಲ್ಲ.
2.
ಮಾಹಿತಿ ಆಯುಕ್ತನಿಗೆ ಸಂದಾಯ ಮಾಡತಕ್ಕ ವೇತನ ಮತ್ತು ಭತ್ಯೆಗಳು ಹಾಗೂ ಆತನ ಇತರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳು ಒಬ್ಬ ಚುನಾವಣಾ ಆಯುಕ್ತನ ಸಂಬಳ ಮತ್ತು ಭತ್ಯೆಗಳು ಹಾಗೂ ಇತರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳಂತೆಯೇ ಇರತಕ್ಕದ್ದು.
3.
ಮಾಹಿತಿ ಆಯುಕ್ತನು ಮುಖ್ಯ ಮಾಹಿತಿ ಆಯುಕ್ತನಾಗಿ ನೇಮಕಗೊಂಡ ಪಕ್ಷದಲ್ಲಿ ಆತನ ಹುದ್ದೆಯು ಮಾಹಿತಿ ಆಯುಕ್ತ ಮತ್ತು ಮುಖ್ಯ ಮಾಹಿತಿ ಆಯುಕ್ತನಾಗಿ ಒಟ್ಟು ಐದು ವರ್ಷಗಳಿಗಿಂತ ಹೆಚ್ಚಾಗತಕ್ಕದ್ದಲ್ಲ.
 
22.
ಉತ್ತರ.
1.
ಕರ್ನಾಟಕ ಮಾಹಿತಿ ಆಯೋಗವನ್ನು ಕರ್ನಾಟಕ ಸರ್ಕಾರದ ತನ್ನ ರಾಜ್ಯ ಪತ್ರದಲ್ಲಿ ಪ್ರಕಟಿಸುವ ಮೂಲಕ ರಚಿಸಿದೆ. ಆಯೋಗದಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ರಾಮುಮಾಆ) ಹಾಗೂ 10 ಜನರನ್ನು ಮೀರದಂತೆ ರಾಜ್ಯ ಮಾಹಿತಿ ಆಯುಕ್ತರು (ರಾಮಾಆ) ಇರಬಹುದಾಗಿದ್ದು. ಇವರನ್ನು ರಾಜ್ಯಪಾಲರು ನೇಮಿಸುತ್ತಾರೆ.
2.
ರಾಜ್ಯ ಮಾಹಿತಿ ಆಯೋಗದ ಕೇಂದ್ರ ಕಚೇರಿಯು, ರಾಜ್ಯ ಸPÁðರವು ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ರಾಜ್ಯದ ನಿ¢üðಷ್ಟಪಡಿಸಬಹುದಾದಂಥ ಯಾವುದೇ ಸ್ಥಳದಲ್ಲಿರತಕ್ಕದ್ದು ಮತ್ತು ರಾಜ್ಯ ಸPÁðರದ ಪೂವðನುಮೋದನೆಯೊಂದಿಗೆ ರಾಜ್ಯ ಮಾಹಿತಿ ಆಯೋಗವು, ರಾಜ್ಯದ ಇತರ ಸ್ಥಳಗಳಲ್ಲಿ ಕಚೇರಿಗಳನ್ನು ಸ್ಥಾಪಿಸಬಹುದು.
3.
ರಾಜ್ಯ ಮಾಹಿತಿ ಆಯೋಗದ ವ್ಯವಹಾರಗಳ ಸಾಮಾನ್ಯ ಉಸ್ತುವಾರಿ, ನಿದರ್ೇಶನ ಮತ್ತು ನಿರ್ವಹಣೆಯು ರಾಜ್ಯ ಮುಖ್ಯ ಮಾಹಿತಿ ಆಯುಕ್ತನಲ್ಲಿ ನಿಹಿತವಾಗಿರತಕ್ಕದ್ದು. ಅವನಿಗೆ ರಾಜ್ಯ ಮಾಹಿತಿ ಆಯುಕ್ತರುಗಳು ಸಹಾಯ ನೀಡತಕ್ಕದ್ದು ಮತ್ತು ಅವನು ಈ ಅಧಿನಿಯಮದಡಿಯಲ್ಲಿ ಯಾವುದೇ ಇತರ ಪ್ರಾಧಿಕಾರವು ನೀಡುವ ನಿದರ್ೇಶನಗಳಿಗೆ ಒಳಪಡದೆ ರಾಜ್ಯ ಮಾಹಿತಿ ಆಯೋಗವು ಚಲಾಯಿಸಬಹುದಾದಂಥ ಎಲ್ಲ ಅಧಿಕಾರಗಳನ್ನು ಸ್ವತಂತ್ರವಾಗಿ ಚಲಾಯಿಸಬಹುದು ಮತ್ತು ನಿರ್ವಹಿಸಬಹುದಾದಂಥ ಎಲ್ಲ ಅಂಥ ಕಾರ್ಯಗಳನ್ನು ಮತ್ತು ವಿಷಯಗಳನ್ನು ನಿರ್ವಹಿಸಬಹುದು.
 
23.
ಉತ್ತರ.
1.
ಮುಖ್ಯ ಮಾಹಿತಿ ಆಯುಕ್ತ ಹಾಗೂ ಮಾಹಿತಿ ಆಯುಕ್ತರುಗಳನ್ನು ಮುಖ್ಯಮಂತ್ರಿ (ಅಧ್ಯಕ್ಷರು), ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಿಂದ ನಾಮನಿzÉÃðಶಿತನಾದ ಸಚಿವ ಸಂಪುಟ ದeÉðಯ ಒಬ್ಬ ಸಚಿವರು ಒಳಗೊಂಡಿರುತ್ತಾರೆ.
2.
ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರುಗಳು ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜಸೇವೆ, ವ್ಯವಸ್ಥಾಪನೆ, ಪತ್ರಿಕೋದ್ಯಮ, ಸಮೂಹ ಮಾಧ್ಯಮ, ನಿರ್ವಹಣೆ ಅಥವಾ ಆಡಳಿತ ಈ ಕ್ಷೇತ್ರಗಳಲ್ಲಿ ಆಳವಾದ ಜ್ಞಾನ ಮತ್ತು ಅನುಭವವನ್ನು ಹೊಂದಿರವುದರೊಂದಿಗೆ, ಸಾರ್ವಜನಿಕ ಜೀವನದಲ್ಲಿ ಉನ್ನತಸ್ಥಾನ ಗಳಿಸಿರುವಂಥ ವ್ಯಕ್ತಿಗಳಾಗಿರತಕ್ಕದ್ದು.
3.
ಮುಖ್ಯ ಮಾಹಿತಿ ಆಯುಕ್ತರು ಅಥವಾ ಸಂದ¨sÁðನುಸಾರ, ಒಬ್ಬ ಮಾಹಿತಿ ಆಯುಕ್ತನು ಒಬ್ಬ ಸಂಸತ್ ಸದಸ್ಯ ಅಥವಾ ಯಾವುದೇ ರಾಜ್ಯದ ಅಥವಾ ಕೇಂದ್ರಾಡಳಿತ ಪ್ರದೇಶದ ವಿಧಾನಮಂಡಲದ ಸದಸ್ಯನಾಗಿರತಕ್ಕದ್ದಲ್ಲ, ಅಥವಾ ಯಾವುದೇ ಇತರ ಲಾಭದಾಯಕ ಪದನಾಮವನ್ನು ಹೊಂದಿರತಕ್ಕದ್ದಲ್ಲ ಅಥವಾ ಯವುದೇ ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ವ್ಯವಹಾರವನ್ನು ನಡೆಸತಕ್ಕದ್ದಲ್ಲ ಅಥವಾ ಯಾವುದೇ ವೃತ್ತಿಯನ್ನು ಅವಲಂಬಿಸಿರತಕ್ಕದ್ದಲ್ಲ ರಾಜ್ಯ ಮುಖ್ಯ ಮಾಹಿತಿ ಆಯುಕ್ತನಿಗೆ ಸಂದಾಯ ಮಾಡತಕ್ಕ ಸಂಬಳ ಮತ್ತು ಭತ್ಯೆಗಳು ಹಾಗೂ ಆತನ ಇತರ ಸೇವಾ ನಿಬಂದನಿಗಳು ಹಾಗೂ ಷರತ್ತುಗಳು ಚುನಾವಣಾ ಅಯುಕ್ತನ ಸಂಬಳ ಮತ್ತು ಭತ್ಯೆಗಳು ಮತ್ತು ಇತರ ಸೇವಾ ನಿಬಂಧನೆಗಳು ಹಾಗೂ ಷರತ್ತುಗಳಂತೆಯೇ ಇರತಕ್ಕದ್ದು ಹಾಗೂ ರಾಜ್ಯ ಮಾಹಿತಿ ಆಯುಕ್ತನಿಗೆ ಸಂದಾಯ ಮಾಡತಕ್ಕ ಸಂಬಳ ಮತ್ತು ಭತ್ಯೆಗಳು ಹಾಗೂ ಆತನ ಇತರ ಸೇವಾ ನಿಬಂದನಿಗಳು ಹಾಗೂ ಷರತ್ತುಗಳು ರಾಜ್ಯ ಸPÁðರದ ಮುಖ್ಯ ಕಾರ್ಯದ²ðಯ ಸಂಬಳ ಮತ್ತು ಭತ್ಯೆಗಳು ಮತ್ತು ಇತರ ಸೇವಾ ನಿಬಂಧನೆಗಳು ಹಾಗೂ ಷರತ್ತುಗಳಂತೆಯೇ ಇರತಕ್ಕದ್ದು.
 
24.
ಉತ್ತರ.
1.
ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು ಕೇಂದ್ರ ಮಾಹಿತಿ ಆಯೋಗ ಅಥವಾ ರಾಜ್ಯ ಮಾಹಿತಿ ಆಯೋಗ ಸಂದರ್ಭನುಸಾರ ಯಾವುದೇ ವ್ಯಕ್ತಿಯಿಂದ ಫಿAiÀiÁðದನ್ನು ಸ್ವೀಕರಿಸಿ ವಿಚಾರಣೆ ಮಾಡುವುದು.
a.
b.
c.
d.
ಆತನು ಅನುಚಿತವೆಂದು ಪರಿಗಣಿಸುವ ಶುಲ್ಕದ ಮೊತ್ತವನ್ನು ಸಂದಾಯ ಮಾಡುವಂತೆ ಅಗತ್ಯಪಡಿಸಲಾಗಿರುವಂಥ;
e.
ಆತನಿಗೆ, ಈ ಅಧಿನಿಯಮದಡಿಯಲ್ಲಿ ಅಪೂರ್ಣ, ತಪ್ಪುದಾರಿಗೆ ಎಳೆಯುವ ಅಥವಾ ಸುಳ್ಳು ಮಾಹಿತಿಯನ್ನು ನೀಡಿದ್ದಾರೆಂದು ನಂಬುವಂಥ;
f.
ಈ ಅದಿನಿಯಮದಡಿಯಲ್ಲಿ ದಾಖಲೆಗಳಿಗಾಗಿ ಕೋರುವುದಕ್ಕೆ ಅಥವಾ ದಾಳಕೆಗಳನ್ನು ಜಪಡೆಯುವುದಕ್ಕೆ ಸಂಬಂಧಿಸಿದ ಯಾವುದೇ ಇತರ ವಿಷಯದ ಸಂಬಂಧದಲ್ಲಿ ಯಾರೇ ವ್ಯಕ್ತಿಯಿಂದ ಅಧಿನಿಯಮದ ಉಪಬಂಧನಗೊಳಪಟ್ಟು ಸ್ವೀಕರಿಸಿ ವಿಚಾರಣೆ ನಡೆಸುವುದು ಕೇಂದ್ರ ಮಾಹಿತಿ ಆಯೋಗದ ಅಥವಾ ಸಂದ¨sÁðನುಸಾರ, ರಾಜ್ಯ ಮಾಹಿತಿ ಆಯೋಗದ ಕರ್ತವ್ಯವಾಗಿರುತಕ್ಕದು.
2.
ಕೇಂದ್ರ ಮಾಹಿತಿ ಆಯೋಗ ಅಥವಾ ಸಂದ¨sÁðನುಸಾರ, ರಾಜ್ಯ ಮಾಹಿತಿ ಆಯೋಗವು, ಈ ವಿಷಯದ ಬಗ್ಗೆ ವಿಚಾರಣೆ ನಡೆಸುವುದಕ್ಕೆ ಸೂಕ್ತ ಕಾರಣಗಳಿವೆಯೆಂದು ಮನಗಂಡರೆ, ಅದು ಆ ಸಂಬಂಧದಲ್ಲಿ ವಿಚಾರಣೆಯನ್ನು ಪ್ರಾರಂಭಿಸಬಹುದು.
3.
ಕೇಂದ್ರ ಮಾಹಿತಿ ಆಯೋಗ ಅಥವಾ ಸAzÀ¨sÁðನುಸಾರ, ರಾಜ್ಯ ಮಾಹಿತಿ ಆಯೋಗವು, ಈ ಪ್ರಕರಣದ ಅಡಿಯಲ್ಲಿ ಯಾವುದೇ ವಿಷಯದ ಬಗ್ಗೆ ವಿಚಾರಣೆಯನ್ನು ನಡೆಸುವಾಗ, ಈ ಮುಂದಿನ ವಿಷಯಗಳ ಸಂಬಂಧದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ನಿಹಿತಗೊಳಿಸಲಾದಂತಹದೇ ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:-
a.
ವ್ಯಕ್ತಿಗಳ ಹಾಜರಾತಿಗಾಗಿ ಸಮನ್ಸ್ ಮಾಡುವುದು ಮತ್ತು ಒತ್ತಾಯಿಸುವುದು ಹಾಗೂ ಪ್ರಮಾಣ ವಚನದ ಮೇಲೆ ಮೌಖಿಕ ಅಥವಾ ಲಿಖಿತ ಸಾಕ್ಷ್ಯವನ್ನು ನೀಡುವುದಕ್ಕೆ ಮತ್ತು ದಸ್ತಾವೇಜುಗಳು ಅಥವಾ ವಸ್ತುಗಳನ್ನು ಹಾಜರುಪಡಿಸುವುದಕ್ಕೆ ಅವರನ್ನು ಒತ್ತಾಯಿಸುವುದು;
b.
ದಸ್ತಾವೇಜುಗಳ ಶೋದನೆ ಮತ್ತು ಪರಿಶೀಲನೆಯನ್ನು ಅಗತ್ಯಪಡಿಸುವುದು;
c.
ಅಫಿದಾವಿತ್ತಿನ ಮೇಲೆ ಸಾಕ್ಷ್ಯವನ್ನು ಸ್ವೀಕರಿಸುವುದು;
d.
ಯಾವುದೇ ನ್ಯಾಯಾಲದ ಅಥವಾ ಕಚೇರಿಯಿಂದ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ಪ್ರತಿಗಳನ್ನು ಕಡ್ಡಾಯವಾಗಿ ಕೋರುವುದು;
e.
ಸಾಕ್ಷಿದಾರರ ಅಥವಾ ದಸ್ತಾವೇಜುಗಳ ಪರೀಕ್ಷೆಗಾಗಿ ಸಮನ್ಸ್ಗಳನ್ನು ಹೊರಡಿಸುವುದು;
f.
ಗೊತ್ತುಪಡಿಸಬಹುದಾದ ಯಾವುದೇ ಇತರ ವಿಷಯ..
4.
ಸಂಸತ್ತಿನ, , ರಾಜ್ಯ ವಿಧಾನ ಮಂಡಲದ ಯಾವುದೇ ಇತರ ಅಧಿನಿಯಮದಲ್ಲಿ ಅಸಂಗತವಾದುದು ಏನೇ ಇದ್ದರೂ, ಕೇಂದ್ರ ಮಾಹಿತಿ ಆಯೋಗ ಅಥವಾ ಸಂದಭರ್ಾನುಸಾರ, ರಾಜ್ಯ ಮಾಹಿತಿ ಆಯೋಗವು, ಈ ಅಧಿನಿಯಮದಡಿಯಲ್ಲಿ ಯಾವುದೇ ದೂರನ್ನು ವಿಚಾರಣೆ ಮಾಡುವ ಅವಧಿಯಲ್ಲಿ ಈ ಅಧಿನಿಯಮವು ಅನ್ವಯಿಸುವ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಯಾವುದೇ ದಾಖಲೆಯನ್ನು ಪರೀಕ್ಷಿಸಬಹುದು ಮತ್ತು ಅಂಥ ದಾಖಲೆಯನ್ನು ಯಾವುದೇ ಕಾರಣಗಳ ಮೇಲೆ ಅದಕ್ಕೆ ದೊರೆಯದಂತೆ ತೆಡಹಿಡಿಯತಕ್ಕದ್ದಲ್ಲ.
5.
ಈ ಅಧಿನಿಯಮದ ಉಪಬಂಧಗಳನ್ನು ಪಾಲಿಸುವಂತೆ ಮಾಡಲು ಈ ಮುಂದಿನವುಗಳನ್ನು ಒಳಗೊಂಡಂತೆ ಅವಶ್ಯವಾಗಬಹುದಾದಂಥ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕ ಪ್ರಾಧಿಕಾರವನ್ನು ಅಗತ್ಯಪಡಿಸುವ ಅಧಿಕಾರವನ್ನು ಹೊಂದಿರತ್ತದೆ.
a.
ನಿ¢üðಷ್ಟ ರೀತಿಯಲ್ಲಿ ಮಾಹಿತಿ ಪಡೆಯಲು ಅವಕಾಶ ನೀಡುವಂತೆ ಕೋರಿದರೆ ಆ ರೀತಿಯಲ್ಲಿ ಮಾಹಿತಿ ಪಡೆಯಲು ಅವಕಾಶ ನೀಡುವುದು;
b.
ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದ¨sÁðನುಸಾರ, ಸಹಾಯಕ ರಾಜ್ಯ ಮಾಹಿತಿ ಅಧಿಕಾರಿಯನ್ನು ನೇಮಿಸುವುದು;
c.
ಕೆಲವು ಮಾಹಿತಿಯನ್ನು ಅಥವಾ ಮಾಹಿತಿಯ ಪ್ರವರ್ಗಗಳನ್ನು ಪ್ರಕಟಿಸುವುದು;
d.
ದಾಖಲೆಗಳ ನಿರ್ವಹಣೆ, ವ್ಯವಸ್ಥಾಪನೆ ಮತ್ತು ನಾಶಕ್ಕೆ ಸಂಬಂಧಿಸಿದಂತೆ ತಾನು ಅನುಸರಿಸುತ್ತಿರುವ ಪದ್ಧತಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು;
e.
ಮಾಹಿತಿ ಹಕ್ಕಿನ ಬಗ್ಗೆ ತನ್ನ ಅಧಿಕಾರಿಗಳಿಗೆ ತರಬೇತಿ ಅವಕಾಶವನ್ನು ಹೆಚ್ಚಿಸುವುದು;
f.
4ನೇ ಪ್ರಕರಣದ (1)ನೇ ಉಪ ಪ್ರಕರಣದ (ಬಿ) ಖಂಡದ ಪ್ರಕಾರ ವಾ¶ðಕ ವರದಿಯೊಂದನ್ನು ಅದಕ್ಕೆ ಒದಗಿಸುವುದು.
g.
ಯಾವುದೇ ನಷ್ಟ ಅಥವಾ ಇತರ ಹಾನಿಗಾಗಿ ದುದಾರನಿಗೆ ನಷ್ಟ ಪರಿಹಾರ ನೀಡುವಂತೆ ಸಾರ್ವಜನಿಕ ಪ್ರಾಧಿಕಾರವನ್ನು ಅಗತ್ಯಪಡಿಸುವುದು;
h.
ಈ ಅಧಿನಿಯಮದ ಅಡಿಯಲ್ಲಿ ಉಪಬಂಧಿಸಲಾದ ಯಾವುದೇ ಒಂದು ದಂಡನೆಯನ್ನು ವಿಧಿಸುವುದು;
i.
ಅfðಯನ್ನು ತಿರಸ್ಕರಿಸುವುದು.
 
25.
ಉತ್ತರ.
1.
ಕೇಂದ್ರ ಮಾಹಿತಿ ಆಯೋಗ ಅಥವಾ ಸಂದ¨sÁðನುಸಾರ, ರಾಜ್ಯ ಮಾಹಿತಿ ಆಯೋಗವು, ಪ್ರತಿಯೊಂದು ವರ್ಷದ ಮುಕ್ತಾಯದ ನಂತರ, ಸಾಧ್ಯವಾದಷ್ಟು ಬೇಗನೆ, ಆ ವರ್ಷದ ಅವಧಿಯಲ್ಲಿ ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯಗತಗೊಳಿಸಿದ ಬಗ್ಗೆ ಒಂದು ವರದಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಅದರ ಒಂದು ಪ್ರತಿಯನ್ನು ಸಮುಚಿತ ಸPÁðರಕ್ಕೆ ಸಲ್ಲಿಸತಕ್ಕದ್ದು.
2.
ಪ್ರತಿಯೊಂದು ಸಚಿವಾಲಯವು ಅಥವಾ ಇಲಾಖೆಯ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ, ಈ ಪ್ರಕರಣದ ಅಡಿಯಲ್ಲಿ ವರದಿಯನ್ನು ಸಿದ್ಧಪಡಿಸಲು ಅಗತ್ಯಪಡಿಸಲಾದಂಥ ಮಾಹಿತಿಯನ್ನು ಸಂಗ್ರಹಿಸಿ ಕೇಂದ್ರ ಮಾಹಿತಿ ಆಯೋಗಕ್ಕೆ ಅಥವಾ ಸಂದಭರ್ಾನುಸಾರ, ರಾಜ್ಯ ಮಾಹಿತಿ ಆಯೋಗಕ್ಕೆ ಒದಗಿಸತಕ್ಕದ್ದು.
3.
ವರದಿಯನ್ನು ಸಿದ್ಧಪಡಿಸಲು ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಕ್ಕೆ ಸಲ್ಲಿಸಿದ ಕೋರಿಕೆಗಳ ಸಂಖ್ಯೆ, ಸಲ್ಲಿಸಲಾದ ಅಪೀಲುಗಳ ಸಂಖ್ಯೆ, ಅಧಿಕಾರಿಯ ವಿರುದ್ಧ ತೆಗೆದುಕೊಂಡ ಯಾವುದೇ ಶಿಸ್ತು ಕ್ರಮದ ವಿವರಗಳು, ಸಂಗ್ರಹಿಸಲಾದ ಶಲ್ಕುಗಳ ಮೊತ್ತ, ಇತ್ಯಾದಿ.,
4.
ಕೇಂದ್ರ ಸಕರ್ಾರವು ಅಥವಾ ಸಂದ¨sÁðನುಸಾರ, ರಾಜ್ಯ ಸPÁðರವು ಪ್ರತಿ ವರ್ಷವೂ ಮುಕ್ತಾಯಗೊಂಡ ನಂತರ ಕಾರ್ಯಸಾಧ್ಯವಾಷ್ಟು ಬೇಗನೆ, ಕೇಂದ್ರ ಮಾಹಿತಿ ಆಯೋಗದ ಅಥವಾ ಸಂದ¨sÁðನುಸಾರ, ರಾಜ್ಯ ಮಾಹಿತಿ ಆಯೋಗದ ವರದಿಯ ಒಂದು ಪ್ರತಿಯನ್ನು ಸಂಸತ್ತಿನ ಪ್ರತಿಯೊಂದು ಸದನದ ಮುಂದೆ ಅಥವಾ ಸಂದ¨sÁðನುಸಾರ, ರಾಜ್ಯ ವಿಧಾನ ಮಂಡಲದಲ್ಲಿ, ಎರಡು ಸದನಗಳಿರುವಲ್ಲಿ ಪ್ರತಿಯೊಂದು ಸದನದ ಮುಂದೆ ಮತ್ತು ಒಂದು ಸದನವಿರುವಲ್ಲಿ ಆ ಸದನದ ಮುಂದೆ ಮಂಡಿಸುವಂತೆ ಮಾಡಬಹುದು.
 
26.
ಉತ್ತರ.
ಪ್ರತಿಯೊಬ್ಬ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ದಿನಕ್ಕೆ ರೂ.250/- ರಂತೆ, ಗರಿಷ್ಠ ರೂ. 25,000/- ಗಳಷ್ಟೂ ಈ ಕೆಳಕಂಡ ಕಾರಣಗಳಿಗೆ ದಂಡವಿಧಿಸಬಹುದು:-
a.
ಮಾಹಿತಿ ಕೋರಿಕೆ ಅರ್ಜಿಯನ್ನು ಸ್ವೀಕರಿಸದಿದ್ದಲ್ಲಿ;
b.
ಯಾವುದೇ ಯುಕ್ತ ಕಾರಣವಿಲ್ಲದೆ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆಂದು;
c.
ನಿ¢üðಷ್ಟಪಡಿಸಿದ ಸಮಯದೊಳಗೆ ಮಾಹಿತಿ ನೀಡಿಲ್ಲವೆಂದು;
d.
ದುರುದ್ದೇಶದಿಂದ ಮಾಹಿತಿಯ ಕೋರಿಕೆಯನ್ನು ನಿರಾಕರಿಸಿದ್ದಾನೆಂದು;
e.
ಗೊತ್ತಿದ್ದೂ ಸರಿಯಲ್ಲದ, ಅಪೂರ್ಣ ಅಥವಾ ದಾರಿ ತಪ್ಪಿಸುವ ಮಾಹಿತಿ ನೀಡಿದ್ದಾನೆಂದು;
f.
ಕೋರಿಕೆಯ ವಿಷಯವಾಗಿದ್ದ ಮಾಹಿತಿಯನ್ನು ನಾಶಪಡಿಸಿದ್ದಾನೆಂದು.,ಮಾಹಿತಿ ಒದಗಿಸುವುದಕ್ಕೆ ಯಾವುದೇ ರೀತಿಯಿಂದ ಅಡ್ಡಿಪಡಿಸಿದ್ದಾನೆಂದು ಅಭಿಪ್ರಾಯಪಟ್ಟರೆ;
ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗವು ದಂಡನೆಯನ್ನು ವಿಧಿಸತಕ್ಕದ್ದು. ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿರುದ್ಧ ಅವನಿಗೆ ಅನ್ವಯವಾಗುವ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡತಕ್ಕದ್ದು.
 
27.
ಉತ್ತರ.
1.
ಯಾವುದೇ ನ್ಯಾಯಾಲಯವೂ ಈ ಅಧಿನಿಯಮದ ಅಡಿಯಲ್ಲಿ ಮಾಡಲಾದ ಯಾವುದೇ ಆದೇಶದ ಸಂಬಂಧದಲ್ಲಿ ಯಾವುದೇ ದಾವೆ, ಅರ್ಜಿ ಅಥವಾ ಇತರ ವ್ಯವಹರಣೆಯನ್ನು ಸ್ವೀಕರಿಸತಕ್ಕದ್ದಲ್ಲ.
 
28.
ಉತ್ತರ.
1.
ಈ ಅಧಿನಿಯಮದ ಅಡಿಯಲ್ಲಿ ಉದ್ದೇಶಿಸಿದ ಹಕ್ಕುಗಳನ್ನು ಹೇಗೆ ಚಲಾಯಿಸಬೇಕೆಂಬ ಬಗ್ಗೆ ಸಾರ್ವಜನಿಕರ ಅದರಲ್ಲೂ ವಿಶೇಷವಾಗಿ ಅವಕಾಶ ವಂಚಿತ ಸಮುದಾಯಗಳ ತಿಳಿವಳಿಕೆ ಮಟ್ಟವನ್ನು ಹೆಚ್ಚಿಸಲು ಶೈಕ್ಷಣಿಕ ಕಾರ್ಯಕ್ತಮಗಳನ್ನು ರೂಪಿಸಬಹುದು ಮತ್ತು ಸಂಘಟಿಸಬಹುದು;
2.
'ಎ' ಖಂಡದಲ್ಲಿ ಉಲ್ಲೇಖಿಸಿರುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಮತ್ತು ಸಂಘಟಿಸುವುದರಲ್ಲಿ, ಭಾಗವಹಿಸಲು ಮತ್ತು ಅಂಥ ಕಾರ್ಯಕ್ರಮಗಳನ್ನು ಸ್ವತಃ ತಾವೇ ಕೈಗೊಳ್ಳಲು ಸಾರ್ವಜನಿಕ ಪ್ರಾಧಿಕಾರಗಳನ್ನು ಪ್ರೋತ್ಸಾಹಿಸಬಹುದು;
3.
ಸಾರ್ವಜನಿಕ ಪ್ರಾಧಿಕಾರಗಳು ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಸಕಾಲದಲ್ಲಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪ್ರಸಾರ ಮಾಡುವುದಕ್ಕೆ ಉತ್ತೇಜಿಸಬಹುದು;
4.
ಸಾರ್ವಜನಿಕ ಪ್ರಾಧಿಕಾರಗಳ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಅಥವಾ ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ತರಬೇತುಗೊಳಿಸಬಹುದು ಮತ್ತು ಸಾರ್ವಜನಿಕ ಪ್ರಾಧಿಕಾರಗಳು ತಮ್ಮ ಬಳಕೆಗಾಗಿ ಸುಸಂಗತ ತರಬೇತಿ ಪರಿಕರಗಳನ್ನು ತಾವೇ ತಯಾರಿಸಿಕೊಳ್ಳಬಹುದು.
5.
ಸಮುಚಿತ ಸPÁðರವು, ಈ ಅಧಿನಿಯಮವು ಪ್ರಾರಂಭವಾದಂದಿನಿಂದ ಹದಿನೆಂಟು ತಿಂಗಳುಗಳೊಳಗೆ, ಈ ಅಧಿನಿಯಮದಲ್ಲಿ ನಿ¢üðಷ್ಟಪಡಿಸಿದ ಯಾವುದೇ ಹಕ್ಕನ್ನು ಚಲಾಯಿಸಲು ಇಚ್ಛಿಸುವ ವ್ಯಕ್ತಿಗೆ ಯುಕ್ತವಾಗಿ ಅಗತ್ಯವಾಗಬಹುದಾದಂಥ ಮಾಹಿತಿಯನ್ನು ಸುಲಭವಾಗಿ ತಿಳಿಯುವ ಸ್ವರೂಪವನ್ನು ಮತ್ತು ರೀತಿಯನ್ನು ಒಳಗೊಂಡ ಮಾರ್ಗದ ಪುಸ್ತಿಕೆಯನ್ನು ತನ್ನ ಅಧಿಕೃತ ಭಾಷೆಯಲ್ಲಿ ಸಂಕಲಿಸತಕ್ಕದ್ದು.
6.
ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಸಂದ¨sÁðನುಸಾರ, ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯ ಅಂಚೆ ಮತ್ತು ರಸ್ತೆ ವಿಳಾಸ, ದೂರವಾಣಿ ಹಾಗೂ ಫ್ಯಾಕ್ಸ್ ಸಂಖ್ಯೆ ಹಾಗೂ ಲಭ್ಯವಿದ್ದಲ್ಲಿ ಇ-ಮೇಲ್ ವಿಳಾಸ, ಜೊತೆಗೆ ಸಂದಾಯ ಮಾಡಬೇಕಾದ ಶುಲ್ಕಕ್ಕೆ ಸಂಬಂಧಪಟ್ಟ ನೋಟೀಸುಗಳು, ಕ್ರಮ ಕೈಗೊಳ್ಳಲು ವಿಫಲವಾದುದಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಲಭ್ಯವಿರುವ ಎಲ್ಲ ಪರಿಹಾರಗಳು.
 
29.
ಉತ್ತರ.
ಸಕ್ಷಮ ಪ್ರಾಧಿಕಾರವು, ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಮಾಹಿತಿ ಹಕ್ಕು ಕಾಯ್ದೆ, 2005ರ ನಿಯಮಗಳನ್ನು ಜಾರಿಗೊಳಿಸಿದ್ದಾರೆ.
 
30.
ಉತ್ತರ.

ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ತೊಂದರೆ ಉದ್ಭವಿಸಿದರೆ, ಅಂಥ ತೊಂದರೆಯನ್ನು ನಿವಾರಿಸಲು ಕೇಂದ್ರ ಸPÁðರವು, ರಾಜ್ಯಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ, ತನಗೆ ಅವಶ್ಯ ಅಥವಾ ವಿಹಿತ ಎಂದು ಕಂಡುಬರಬಹುದಾದಂಥ ಮತ್ತು ಈ ಆಧಿನಿಯಮದ ಉಪಬಂಧಗಳಿಗೆ ಅಸಂಗತವಾಗಿರದಂಥ ಉಪಬಂಧಗಳನ್ನು ಕಲ್ಪಿಸತಕ್ಕದ್ದು.
 
31.
ಉತ್ತರ.

4. ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು:- a) (ಎ) ಈ ಅಧಿನಿಯಮದ ಅಡಿಯಲ್ಲಿ ಮಾಹಿತಿ ಹಕ್ಕಿಗಾಗಿ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಮತ್ತು ನಮೂನೆಯಲ್ಲಿ ಕ್ರಮಬದ್ಧ ಸೂಚಿಪಟ್ಟಿ ಮತ್ತು ಸೂಚೀಕರಣಗೊಂಡ ಅದರ ಎಲ್ಲಾ ದಾಖಲೆಗಳನ್ನು ನಿರ್ವಹಿಸತಕ್ಕದ್ದು ಮತ್ತು ಸೂಕ್ತ ಸಮಯದೊಳಗಾಗಿ ಮತ್ತು ಸಂಪನ್ಮೂಲಗಳ ಲಭ್ಯತೆಗೊಳಪಟ್ಟು, ಗಣಕೀಕರಣಕ್ಕೆ ಸೂಕ್ತವಾದ ಎಲ್ಲ ದಾಖಲೆಗಳನ್ನು ಗಣಕೀಕರಿಸುವಂತೆ ಮತ್ತು ಅಂತಹ ದಾಖಲೆಗಳು ಸುಲಭವಾಗಿ ದೊರೆಯುವಂತೆ ದೇಶಾದ್ಯಂತ ವಿವಿಧ ಸಿಸ್ಪಂಗಳಲ್ಲಿ ಸಂಪರ್ಕಜಾಲದ ಮೂಲಕ ಸಂಪರ್ಕ ಕಲ್ಪಿಸುವಂತೆ ಮಾಡತಕ್ಕದ್ದು. (2) ಈ ಅಧಿನಿಯಮವನ್ನು ಅಧಿನಿಯಮಿತಿಗೊಳಿಸಿದ ದಿನಾಂಕದಿಂದ ಒಂದುನೂರು ಇಪ್ಪತ್ತು ದಿನಗಳೊಳಗಾಗಿ:- (ಎ) ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳನ್ನು; (ಬಿ) ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು; (ಸಿ) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯಿಯಲ್ಲಿ ಅನುಸಿಸಬೇಕಾದ ಕಾರ್ಯವಿಧಾನವನ್ನು; (ಡಿ) ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳನ್ನು; (ಇ) ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಯಮಗಳು, ಅನುಸೂಚಿಗಳು, ಕೈಪಿಡಿಗಳೂ ಮತ್ತು ದಾಖಲೆಗಳನ್ನು; (ಎಫ್) ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರಪಟ್ಟಿಯನ್ನು; (ಜಿ) ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳನ್ನು; (ಹೆಚ್) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳೂ ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿಕೆಯನ್ನು; (ಐ) ಅದರ ಅಧಿಕಾರಿಗಳ ಮತ್ತು ನೌಕರರ ನಿದರ್ೇಶಿಕೆಯನ್ನು. (ಜೆ) ಅದರ ವಿನಿಯಮಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಸಂಬಳವನ್ನು; (ಕೆ) ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ: ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯವನ್ನು; (ಎಲ್) ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳನ್ನು; (ಎಂ) ಅದು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಪತ್ರಗಳನ್ನು ಪಡೆಯುವವರ ವಿವರಗಳನ್ನು; (ಎನ್) ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ¥ÀjªÀwð¹gÀĪÀ, ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು; (ಓ) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು; (ಪಿ) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳೂ ಮತ್ತು ಇತರ ವಿವರಗಳನ್ನು; (ಕ್ಯೂ) ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ ಪರಿಷ್ಕರಿಸತಕ್ಕದ್ದು.